ಕ್ರಿಕೆಟ್

ಎ-ಪ್ಲಸ್ ಶ್ರೇಣಿಯಲ್ಲಿ ಪೂಜಾರ ಹೆಸರು ಸೇರಿಸಬೇಕಿತ್ತು; ನಿರಂಜನ್ ಶಾ

Srinivasamurthy VN
ನವದೆಹಲಿ: ಕ್ರಿಕೆಟಿಗರ ವೇತನ ಒಪ್ಪಂದ ಪರಿಷ್ಕರಣೆ ಮಾಡಿರುವ ಬಿಸಿಸಿಐ ನಿರ್ಧಾರ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಎ-ಪ್ಲಸ್ ಶ್ರೇಣಿಗೆ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಅವರನ್ನು ಸೇರಿಸಬೇಕಿತ್ತು ಎಂದು ಮಾಜಿ ಬಿಸಿಸಿಐ ಕಾರ್ಯದರ್ಶಿ ನಿರಂಜನ್ ಶಾ ಹೇಳಿದ್ದಾರೆ.

ನಿನ್ನೆಯಷ್ಟೇ ಬಿಸಿಸಿಐ ಜಸ್ ಪ್ರೀತ್ ಬುಮ್ರಾ ರನ್ನು ಎ ಪ್ಲಸ್ ಶ್ರೇಣಿಯ ಆಟಗಾರರ ಪಟ್ಟಿಗೆ ಸೇರಿಸಿ ಕ್ರಿಕೆಟಿಗ ವೇತನ ಒಪ್ಪಂದವನ್ನು ಪರಿಷ್ಕರಣೆ ಮಾಡಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ನಿರಂಜನ್ ಶಾ, ಇತ್ತೀಚಿಗೆ ಮುಕ್ತಾಯವಾದ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಚೇತೇಶ್ವರ ಪೂಜಾರರಷ್ಟು ಯಶಸ್ವೀ ಆಟಗಾರ ಮತ್ತೊಬನಿಲ್ಲ. ಪೂಜಾರ ನಿಜಕ್ಕೂ ಎಪ್ಲಸ್ ಶ್ರೇಣಿಗೆ ಸೇರಬೇಕಾದ ಆಟಗಾರ. ಆಸಿಸ್ ಪ್ರವಾಸದಲ್ಲಿ ಪೂಜಾರ ಯಶಸ್ವೀ ಬ್ಯಾಟ್ಸಮನ್ ಆಗಿದ್ದರು. ಇಡೀ ಸರಣಿಯಲ್ಲಿ ಪೂಜಾರ 1,258 ಎಸೆತಗಳನ್ನು ಎದುರಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇದೊಂದು ದಾಖಲೆಯಾಗಿದೆ. ಹೀಗಿರುವಾಗ ಪೂಜಾರ ಅವರಿಗೆ ಮನ್ನಣೆ ನೀಡಿದಿರುವುದು ಬೇಸರ ತಂದಿದೆ ಎಂದು ಶಾ ಹೇಳಿದ್ದಾರೆ.

ಅಂತೆಯೇ ಬಿಸಿಸಿಐ ಟೆಸ್ಟ್ ಕ್ರಿಕೆಟ್ ಕುರಿತಂತೆ ನಿರ್ಲಕ್ಷ ಧೋರಣೆ ತೋರುತ್ತಿದ್ದು, ಟೆಸ್ಟ್ ಆಟಗಾರರಿಗೆ ಮನ್ನಣೆ ನೀಡುತ್ತಿಲ್ಲ ಎಂದೂ ಶಾ ಆರೋಪಿಸಿದ್ದಾರೆ. 

ಇನ್ನು ಚೇತೇಶ್ವರ ಪೂಜಾರ ಪ್ರಸ್ತುತ ಎ ಶ್ರೇಣಿಯ ಆಟಗಾರರ ಪಟ್ಟಿಯಲ್ಲಿದ್ದು, ವಾರ್ಷಿಕ 5 ಕೋಟಿ ವೇತನ ಪಡೆಯುತ್ತಿದ್ದಾರೆ. ಎಪ್ಲಸ್ ಶ್ರೇಣಿಯಲ್ಲಿನ ಆಟಗಾರರಿಗೆ ವಾರ್ಷಿಕ 7 ಕೋಟಿ ವೇತನ ನೀಡಲಾಗುತ್ತಿದೆ. ಈ ಪಟ್ಟಿಯಲ್ಲಿ ಪ್ರಸ್ತುತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇದ್ದು, ನಿನ್ನೆಯಷ್ಟೇ ಜಸ್ ಪ್ರೀತ್ ಬುಮ್ರಾ ಈ ಪಟ್ಟಿಗೆ ನೂತನವಾಗಿ ಸೇರ್ಪಡೆಯಾಗಿದ್ದರು.
SCROLL FOR NEXT